ಮರೀಚಿ ಅಸಹಜ ಸಾವುಗಳ ಹಿಂದೆ ಸೇಡಿನ ಛಾಯೆ ! -ರೇಟಿಂಗ್ : 3.5/5 ****
Posted date: 10 Sun, Dec 2023 10:04:30 AM
ತನ್ನ ಕುಟುಂಬಕ್ಕೆ ಆದ ಅವಮಾನ, ಅದಕ್ಕೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳಲು ಆತ ಹುಡುಕಿಕೊಳ್ಳುವ ಮಾರ್ಗ ಇದರ ಸುತ್ತ ನಡೆಯುವ ಕಥೆ ಮರೀಚಿ. ಸಾವು ಸಂಭವಿಸಿದಾಗ ಅದು ಕೊಲೆಯೋ ಸಹಜ ಸಾವೋ ಎಂಬ  ತನಿಖೆಯ ಸುತ್ತ ನಡೆಯುವ ಕುತೂಹಲಕರ ಜರ್ನಿ ಮರೀಚಿ ಚಿತ್ರದ ಕಾನ್ಸೆಪ್ಟ್. ಅಸಹಜವಾಗಿ ಸತ್ತವರ ಜಾಡು ಹಿಡಿದು ಹೊರಟ ಪೊಲೀಸ್ ಅಧಿಕಾರಿ ಭೈರವ್ ನಾಯಕ್ ಪಾತ್ರದಲ್ಲಿ  ವಿಜಯ್ ರಾಘವೇಂದ್ರ  ಕಾಣಿಸಿಕೊಂಡಿದ್ದು, ಅವರ  ಮಡದಿಯಾಗಿ ಸೋನುಗೌಡ ಅಭಿನಯಿಸಿದ್ದಾರೆ. ಆ ಕೊಲೆಗಳನ್ನು ಮಾಡುತ್ತಿರುವವರು ಯಾರು, ಅವರ ಉದ್ದೇಶವಾದರೂ ಏನು,  ಬೇರೆ ಬೇರೆ ಜಾಗಗಳಲ್ಲಿ ನಡೆದ ವಿಚಿತ್ರ ಕೊಲೆ ಪ್ರಕರಣಗಳ ತನಿಖೆ ನಡೆಸುವ ಪೊಲೀಸರಿಗೆ ಸಿಕ್ಕ ಮಾಹಿತಿಯಾದರೂ ಏನು ಎಂಬುದನ್ನು ತಿಳಿಯಲು ನೀವು ಮರೀಚಿ ಚಿತ್ರವನ್ನು ವೀಕ್ಷಿಸಲೇಬೇಕು. ಅಭಿದಾಸ್, ಸ್ಪಂದನಾ ಸೋಮಣ್ಣ, ಅರುಣಾ ಬಾಲರಾಜ್, ಆರ್ಯನ್ ಎಸ್.ಜಿ. ಇವರೆಲ್ಲ ತಮಗೆ ಸಿಕ್ಕ ಅವಕಾಶದಲ್ಲೇ ಉತ್ತಮ  ಅಭಿನಯ ನೀಡಿದ್ದಾರೆ. 
 
ಕೊಲೆಯಾದ ಎಲ್ಲ ವೈದ್ಯರು ಕೂಡ ಒಳ್ಳೆಯವರು. ಹಾಗಿದ್ದರೂ ಅವರು ಯಾಕೆ ಹತ್ಯೆಗೀಡಾಗುತ್ತಾರೆ. ಮುಂದಿನ ಕೊಲೆ ಎಲ್ಲಿ ಮತ್ತು ಹೇಗೆ ನಡೆಯುತ್ತದೆ ಎಂಬ ಸುಳಿವನ್ನು ಕೂಡ ಆ  ಕೊಲೆಗಾರ ಬಿಟ್ಟುಕೊಡುತ್ತಾನೆ. ಯಾಕೆ ಈ ರೀತಿ ನಡೆಯುತ್ತದೆ? ಅದನ್ನು ಮಾಡಿದವರು ಯಾರು? ಸರಣಿ ಹಂತನ ಉದ್ದೇಶವಾದರೂ ಏನಾಗಿರುತ್ತೆ, ಇವರೆಲ್ಲರ ಮೇಲೆ ಆತನಿಗಿರುವ ದ್ವೇಶವಾದರೂ ಏನಾಗಿತ್ತು, ಅಥವಾ ಆತನೇನು‌ ಸೈಕೋನಾ  ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದ್ದರೆ ಪೂರ್ತಿ ಸಿನಿಮಾ ನೋಡಬೇಕು. ನಟ ಗೋಪಾಲಕೃಷ್ಣ ದೇಶಪಾಂಡೆ  ಅವರು ಇಡೀ ಚಿತ್ರಕಥೆಗೆ ಟ್ವಿಸ್ಟ್ ಕೊಡುವಂಥ ಪಾತ್ರವನ್ನು ನಿರ್ವಹಿಸಿದ್ದಾರೆ, 
ಸಸ್ಪೆನ್ಸ್, ಥ್ರಿಲ್ಲರ್ ಕಹಾನಿಗೆ ಬೇಕಾದಂಥ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ನ್ನು  ಜ್ಯೂಡಾ ಸ್ಯಾಂಡಿ ಅವರು ನೀಡಿದ್ದಾರೆ. ಹಾಡುಗಳು ಚಿತ್ರಕ್ಕೆ  ಪೂರಕವಾಗಿ ಮೂಡಿಬಂದಿವೆ. ತಾಂತ್ರಿಕವಾಗಿ ಸಿನಿಮಾವನ್ನು ಇನ್ನಷ್ಟು ಉತ್ತಮಗೊಳಿಸಿದ್ದರೆ ಚೆನ್ನಾಗಿರುತ್ತಿತ್ತು. ಕಥೆಯಲ್ಲಿ ಕೆಲವು ಕಡೆ ಲಾಜಿಕ್ ಕಾಣೆಯಾಗಿರುವುದು ಪ್ರೇಕ್ಷಕರ ಗಮನಕ್ಕೆ ಬರುತ್ತದೆ. ಈಗಾಗಲೇ ಅನೇಕ ಮರ್ಡರ್ ಮಿಸ್ಟರಿ ಸಿನಿಮಾಗಳನ್ನು ನೋಡಿರುವ ಪ್ರೇಕ್ಷಕರಿಗೆ ಇದರಲ್ಲಿ  ಒಂದಷ್ಟು ಹೊಸ ಕಂಟೆಂಟ್ ಇರುವುದು ಇಂಟರೆಸ್ಟಿಂಗ್ ಆಗಿದೆ, ಸಸ್ಪೆನ್ಸ್ ಥ್ರಿಲ್ಲರ್  ಸಿನಿಮಾಗಳನ್ನು ಇಷ್ಟಪಡುವವರಿಗೆ ಈ ಚಿತ್ರ ತುಂಬಾ ಆಪ್ತವಾಗುತ್ತದೆ,  ಮನೋಹರ್  ಜೋಶಿ ಅವರ  ಛಾಯಾಗ್ರಹಣ, ಶ್ರೀಕಾಂತ್  ಅವರ ಸಂಕಲನ   ಈ ಚಿತ್ರದ ಹೈಲೈಟ್ ಆಗಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed